|| ಶ್ರೀ ಗಣೇಶಾಯ ನಮಃ ||

ಶ್ರೀ ರಾಮಲಿಂಗೇಶ್ವರ ದೇವಸ್ಥಾನ

ಕಡೆಗುಂಟ, ಸೋಂದಾ · ಶಿರಸಿ ತಾಲೂಕು · ಉತ್ತರ ಕನ್ನಡ
ತನ್ನೋ ರುದ್ರಃ ಪ್ರಚೋದಯಾತ್
An 800-year-old shrine, reborn in stone
ನೂತನ ಶಿಲಾಮಯ ದೇವಾಲಯ – proposed stone temple elevation
Scroll
0+
ವರ್ಷಗಳ ಧಾರ್ಮಿಕ ಇತಿಹಾಸ
years of heritage
₹0 ಕೋಟಿ
ನಿರ್ಮಾಣಕ್ಕೆ ಅಗತ್ಯ
needed to rebuild
0/6
ರಾಶಿಗಳಲ್ಲಿ ದೇವತಾ ಅನುಗ್ರಹ
signs favourable
0
ಕಾಮಗಾರಿಗಳು · 9 ವಿಭಾಗ
work items planned
ಸವಿನಯ ಪ್ರಾರ್ಥನೆ

ಎಲ್ಲಾ ಸದ್ಭಕ್ತಾದಿಗಳಿಗೆ

A humble appeal to every devotee
ಎಲ್ಲಾ ಸದ್ಭಕ್ತಾದಿಗಳಿಗೆ ಸವಿನಯ ಪ್ರಾರ್ಥನೆ,

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಂದಾ ಕಡೆಗುಂಟ ಪ್ರದೇಶದಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನವು, ದೊರೆತಿರುವ ಶಾಸನದ ಲಿಪಿಯನ್ನು ಅಭ್ಯಸಿಸಿದ ಲಿಪಿಕಾರರ ಪ್ರಕಾರ ಮತ್ತು ವಾಸ್ತುಶಿಲ್ಪವನ್ನು ಅರಿತ ವಾಸ್ತು ಶಾಸ್ತ್ರಜ್ಞರ ಅಭಿಪ್ರಾಯದಂತೆ ಸುಮಾರು 800 ವರ್ಷಗಳ ಧಾರ್ಮಿಕ ಇತಿಹಾಸವನ್ನು ಹೊಂದಿದೆ.

ಅಷ್ಟಮಂಗಲದಲ್ಲಿ ಸೂಚಿತವಾದಂತೆ ದೇವಸ್ಥಾನವು ರಾಜಾಶ್ರಯದಲ್ಲಿದ್ದು, ಸನ್ಯಾಸಿಗಳಿಂದ ಪ್ರತಿಷ್ಠಾಪನೆಗೊಂಡು ತ್ರಿಕಾಲ ಪೂಜೆ ಹಾಗೂ ಅತ್ಯಂತ ವೈಭವದಿಂದ ಉತ್ಸವಾದಿಗಳು ನಡೆಯುತ್ತಿದ್ದವು ಎಂದು ತಿಳಿದುಬಂದಿದೆ. ಪ್ರಸ್ತುತ ದೇವಾಲಯವು ಶಿಥಿಲವಾಗಿದೆ.

ಅಷ್ಟಮಂಗಲದಲ್ಲಿ ಸೂಚಿಸಲ್ಪಟ್ಟಂತೆ ಹಾಗೂ ಮಯಮತ, ಮಾನಸಾರ ವಾಸ್ತುಶಾಸ್ತ್ರ ಮತ್ತು ವಾತುಲಾಗಮದ ಪ್ರಕಾರ ನೂತನವಾಗಿ ಶಿಲಾಮಯ ದೇವಸ್ಥಾನವನ್ನು ನಿರ್ಮಿಸಬೇಕಾಗಿದೆ. ಈ ಕಾರ್ಯಕ್ಕೆ ಸರಿಸುಮಾರು ಎರಡು ಕೋಟಿ ರೂಪಾಯಿಗಳಷ್ಟು ಅಗತ್ಯವಿದೆ. ಈ ಮಹತ್ಕಾರ್ಯಕ್ಕೆ ನಿಮ್ಮೆಲ್ಲರ ತನು–ಮನ–ಧನದ ಸಹಾಯವನ್ನು ಕೋರುತ್ತೇವೆ.

ಇಂತಿ ತಮ್ಮ ವಿಶ್ವಾಸಿಗಳು,
ಶ್ರೀ ರಾಮಲಿಂಗೇಶ್ವರ ಪ್ರತಿಷ್ಠಾನ, ಕಡೆಗುಂಟಪೋಸ್ಟ್ ಸೋಂದಾ, ಶಿರಸಿ ತಾಲೂಕು, ಕರ್ನಾಟಕ – 581336
“
ದೇವಾಲಯ ನಿರ್ಮಾಣ ಎನ್ನುವುದು ಭಕ್ತಿಯ ಬಿತ್ತನೆ, ಪುಣ್ಯದ ಬೆಳೆ. ಇದು ನಮ್ಮ ಪರಂಪರೆ, ಇತಿಹಾಸ ಮತ್ತು ಧರ್ಮದ ಪುನರುತ್ಥಾನ.
Building a temple is sowing devotion and reaping merit — the revival of our heritage, history and dharma.
In brief — This temple at Kadegunta carries about 800 years of religious history. Once under royal patronage with thrice-daily worship, it is now dilapidated. A new stone temple in the Keladi–Ikkeri style is planned, needing about ₹2 crore.
ದೇವಾಲಯದ ಇತಿಹಾಸ

ಎಂಟು ಶತಮಾನಗಳ ಭಕ್ತಿ ಪರಂಪರೆ

A sacred history of eight centuries
ಶಾಸನಲಿಪಿಕಾರರು ಅಭ್ಯಸಿಸಿದ ಶಾಸನದ ಲಿಪಿ · Inscription
ವಾಸ್ತುಶಿಲ್ಪವಾಸ್ತು ಶಾಸ್ತ್ರಜ್ಞರ ಅಭಿಪ್ರಾಯ · Architecture
ಅಷ್ಟಮಂಗಲ ಪ್ರಶ್ನೆ13 ಜುಲೈ 2024 · Prashne
ಸುಮಾರು 800–1000 ವರ್ಷಗಳ ಹಿಂದೆ
ರಾಜಾಶ್ರಯದಲ್ಲಿ ಉಪಾಸನೆ
ಪೂರ್ವ–ಈಶಾನ್ಯ ದಿಕ್ಕಿನ ಎತ್ತರದ ಪ್ರದೇಶದ ಮೂಲ ಸ್ಥಾನದಲ್ಲಿ ಇಂದಿಗೂ ಎರಡು ಬೃಹತ್ ಮಂಚದ ಕಲ್ಲುಗಳಿವೆ.
ವೈಭವದ ಕಾಲ
ಸನ್ಯಾಸಿಗಳಿಂದ ಪ್ರತಿಷ್ಠಾಪನೆ, ತ್ರಿಕಾಲ ಪೂಜೆ
ಪಾರ್ವತಿ, ಗಣಪತಿ ಸಹಿತ ಪರಿವಾರ ದೇವತೆಗಳ ಸಾನ್ನಿಧ್ಯ; ಅತ್ಯಂತ ವೈಭವದ ಉತ್ಸವಾದಿಗಳು.
ಸ್ಥಳಾಂತರ
ಈಗಿನ ಸ್ಥಳಕ್ಕೆ ಆಗಮನ
ಶತ್ರುಗಳ ಆಕ್ರಮಣದ ಭೀತಿಯಿಂದ ದೇವರು ವರ್ತಮಾನ ಸ್ಥಳಕ್ಕೆ ಸ್ಥಳಾಂತರಗೊಂಡರು.
ಇಂದು
ಶಿಥಿಲಗೊಂಡ ದೇವಾಲಯ
ಶಾಸ್ತ್ರೋಕ್ತ ಪುನರ್ನಿರ್ಮಾಣಕ್ಕಾಗಿ ಕಾಯುತ್ತಿದೆ — ನಿಮ್ಮ ಸಹಕಾರದೊಂದಿಗೆ.

ಮಲ್ಲ ದೇಶ ಮತ್ತು ಕೆಳದಿ–ಇಕ್ಕೇರಿ ಶೈಲಿ The Malla Desha tradition

ಬನವಾಸಿಯಿಂದ ಕೊಡಚಾದ್ರಿವರೆಗಿನ ಪ್ರದೇಶವನ್ನು ಮಲ್ಲ ದೇಶ ಎಂದು ಕರೆಯುತ್ತಾರೆ. ಇಲ್ಲಿ ಕೆಳದಿ–ಇಕ್ಕೇರಿ ಶೈಲಿಯ ಶಿಲ್ಪಕಲೆ ಪ್ರಸಿದ್ಧವಾಗಿದೆ. ಇದೇ ಶೈಲಿಯಲ್ಲಿ ರಾಮಲಿಂಗೇಶ್ವರ ದೇವಾಲಯ ನಿರ್ಮಿಸುವ ಸುವರ್ಣ ಕಾಲ ಒದಗಿ ಬಂದಿದೆ.

ಬನವಾಸಿBanavasi
ಮಲ್ಲ ದೇಶ
ಕೊಡಚಾದ್ರಿKodachadri
ಪ್ರಸ್ತುತ ಸ್ಥಿತಿ

ಏಕೆ ಪುನರ್ನಿರ್ಮಾಣ?

What the Ashtamangala Prashne found

ದೇವಾಲಯ ಕಟ್ಟಡ Structure

ವರ್ತಮಾನ ಆಲಯವು ಜೀರ್ಣವಾಗಿದೆThe shrine has decayed
ಒಳಗಿನ ನೆಲ ಕುಸಿದಿದೆThe inner floor has sunk
ಬೇರೆ ದೇವಾಲಯದ ಸ್ತಂಭಗಳನ್ನು ಉಪಯೋಗಿಸಿದಂತಿದೆPillars appear reused
ನಂದಿ ವಿಗ್ರಹ ಈಶ್ವರ ಬಿಂಬದ ಪ್ರಮಾಣಕ್ಕೆ ತಕ್ಕದಲ್ಲNandi out of proportion

ಬಿಂಬ ದೋಷಗಳು The idols

ಎರಡೂ ಬಿಂಬಗಳ ಶಿರೋಭಾಗದಲ್ಲಿ ವೈಕಲ್ಯಗಳಿವೆBoth idols damaged at the head
ಅಷ್ಟಬಂಧ ಹಾನಿಯಾಗಿದೆAshtabandha has failed
ಒಂದು ಗರ್ಭಗುಡಿಯಲ್ಲಿ 2 ಬಿಂಬಗಳು – ಆಗಮ ಸಮ್ಮತವಲ್ಲTwo idols in one sanctum

ಪೂಜಾ ಕ್ರಮ Worship

ನಿತ್ಯ ನೈವೇದ್ಯ, ಅಭಿಷೇಕ ಕ್ರಮದಲ್ಲಿ ನಡೆಯುತ್ತಿಲ್ಲDaily offerings irregular
ಕೆಲವೊಮ್ಮೆ ನಿತ್ಯ ಪೂಜೆಯೇ ನಡೆದಿಲ್ಲDaily puja has at times lapsed
ಪರಿಹಾರ: ಹೊಸ ಬಿಂಬ, ಶಾಸ್ತ್ರೋಕ್ತ ನಂದಿ ಮತ್ತು ಸಂಪೂರ್ಣ ಶಿಲಾಮಯ ದೇವಾಲಯ
A new idol, a correctly proportioned Nandi and a complete stone temple with mantapa and sub-shrines.
ಅಷ್ಟಮಂಗಲ ಪ್ರಶ್ನೆ

ದೇವರ ಸಂಕಲ್ಪ – ಸಾರಾಂಶ

Summary of the Ashtamangala Prashne

ಜೀರ್ಣೋದ್ಧಾರಕ್ಕೆ ಮುನ್ನ ಕಡೆಗುಂಟ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ನಡೆಸಿದ ಪ್ರಶ್ನೆ.

ದಿನಾಂಕ
13/07/2024
ಶನಿವಾರ · Saturday
ಪ್ರಶ್ನೆಯ ಸಮಯ
ಮಧ್ಯಾಹ್ನ 12:05
12:05 noon
ಸ್ವರ್ಣಾರೂಢ ರಾಶಿ
ತುಲಾ
Tula · Libra
ಉದಯ ರಾಶಿ
ಕನ್ಯಾ
Kanya · Virgo
123456
ಆರು ರಾಶಿಗಳಲ್ಲಿ 5 ರಾಶಿಗಳಿಂದ ಗುರುವಿನ ಇಷ್ಟ ಸ್ಥಿತಿ — ದೇವತಾ ಅನುಗ್ರಹ ಇದೆ. ಒಂದು ರಾಶಿಯಿಂದ ಮಾತ್ರ ಪ್ರತಿಕೂಲತೆ.
Divine grace is present — five of six signs are favourable.
ಪ್ರದೇವರ ಮೂಲ ಸ್ಥಾನ ಎಲ್ಲಿದೆ?
ಪೂರ್ವ–ಈಶಾನ್ಯ ದಿಕ್ಕಿನ ಎತ್ತರದ ಪ್ರದೇಶದಲ್ಲಿ. ಅಲ್ಲಿ ಎರಡು ಬೃಹತ್ ಆಕಾರದ ಮಂಚದ ಕಲ್ಲುಗಳಿವೆ.
ಪ್ರದೇವರ ಪರಿವಾರ ದೇವತೆಗಳು ಯಾರು?
ಮುಖ್ಯ: ಗಣಪತಿ, ಅಂಬಿಕೆ, ವೀರಭದ್ರ. ಬಾಹ್ಯ: ಸರ್ಪ, ಕಿರಾತ ಮೂರ್ತಿ, ಬ್ರಹ್ಮ, ಚಾಮುಂಡಿ, ಚೌಡಿ.
ಪ್ರವಿಶೇಷ ಉತ್ಸವಗಳು ಯಾವುವು?
ನವರಾತ್ರಿ, ಗಣೇಶೋತ್ಸವ, ಕಾರ್ತಿಕ ದೀಪೋತ್ಸವ, ಶ್ರಾವಣ ಮಾಸದ ಪ್ರತಿ ಸೋಮವಾರ ಧಾನ್ಯ ನೈವೇದ್ಯ, ಶಿವರಾತ್ರಿ.
ಪ್ರಸ್ಥಳ ದೋಷಗಳು ಯಾವುವು?
ಸ್ತ್ರೀ ಶಾಪ, ಬ್ರಹ್ಮರಕ್ಷೋ ಬಾಧೆ, ಸರ್ಪ ಸಾನ್ನಿಧ್ಯಕ್ಕೆ ತೊಂದರೆ, ನಾಗವೀಥಿ ನಷ್ಟ, ಈಶಾನ್ಯ ಕೆರೆ ಮುಚ್ಚಿದೆ.
ಸ್ತ್ರೀ ಶಾಪ ಬ್ರಹ್ಮರಕ್ಷೋ ಬಾಧೆ ಸರ್ಪ ಸಾನ್ನಿಧ್ಯಕ್ಕೆ ತೊಂದರೆ ನಾಗವೀಥಿ ನಷ್ಟ ಈಶಾನ್ಯ ಕೆರೆ ಮುಚ್ಚಿದೆ
“ಎಲ್ಲಾ ಕಾರ್ಯಗಳನ್ನು ಶಾಸ್ತ್ರೀಯ ರೀತಿಯಲ್ಲಿ ಮಾಡಿದರೆ ದೇವರ ಪೂರ್ಣ ಅನುಗ್ರಹ ಪ್ರಾಪ್ತವಾಗುತ್ತದೆ.”— the Prashne’s conclusion
ಪರಿಹಾರಗಳು

ಪ್ರಶ್ನೆಯಲ್ಲಿ ಸೂಚಿತ ಪರಿಹಾರಗಳು

Remedies prescribed by the Prashne
ಮೇಷ ಮಾಸ 2025 ರೊಳಗೆ ಮುಗಿಸಬೇಕಾದವು · to be completed by Mesha masa 2025
1
ಏಕಾದಶ ರುದ್ರಾಭಿಷೇಕಪಂಚಾಕ್ಷರೀ ಜಪ ಮತ್ತು ಪ್ರದಕ್ಷಿಣೆ ನಮಸ್ಕಾರಗಳು
2
ಕೃಚ್ಛ್ರ ಪ್ರಾಯಶ್ಚಿತ್ತಪ್ರತಿಯೊಬ್ಬರು ಸಹಸ್ರ ಸಂಖ್ಯಾ ಗಾಯತ್ರೀ ಮಂತ್ರ ಜಪ
3
ವಿಘ್ನ ನಿವಾರಣೆಷಣ್ನಾಳಿಕೇರ ಗಣ ಯಾಗ ಮತ್ತು ಚಂಡಿಕಾ ಪಾರಾಯಣ
4
ಮೃತ್ಯು ದೋಷ ನಿವಾರಣೆಅಯುತ ಸಂಖ್ಯಾ ಜಪಪೂರ್ವಕ ಮೃತ್ಯುಂಜಯ ಹೋಮ ಮತ್ತು ಶತ ರುದ್ರಾಭಿಷೇಕ
5
ಸರ್ವಾಪರಾಧ ಕ್ಷಮೆಎಲ್ಲಾ ಭಕ್ತರು ಮುಷ್ಟಿ ಕಾಣಿಕೆ ಸಮರ್ಪಣೆ
ಸರ್ಪ ದೋಷ ನಿವೃತ್ತಿ
  • ಆಶ್ಲೇಷಾ ಬಲಿ ಪೂಜೆ
  • ನಾಗ ಪ್ರತಿಬಿಂಬದಲ್ಲಿ ಆವಾಹನೆ ಅಭಿಷೇಕ
ಸ್ಥಳ ದೋಷ ನಿವೃತ್ತಿ
  • ತಿಲಾಜ್ಯ ದ್ರವ್ಯದಿಂದ ಪವಮಾನ ಹೋಮ
  • 12 ಆವರ್ತಿ ಮಹಾನಾರಾಯಣೋಪನಿಷತ್ ಪಾರಾಯಣ
  • ದ್ವಾದಶ ಮೂರ್ತಿ ಬ್ರಾಹ್ಮಣ ಆರಾಧನೆ ಮತ್ತು ದಶದಾನ
ಬ್ರಹ್ಮರಕ್ಷೋ ಬಾಧೆ ನಿವೃತ್ತಿ
  • ಅಯುತ ಸಂಖ್ಯೆ ಗಾಯತ್ರೀ ಮಂತ್ರದಿಂದ ಧಾನ್ಯ ಹೋಮ
  • ಸಹಸ್ರ ಸಂಖ್ಯಾ ತಿಲ ಹೋಮಪೂರ್ವಕ ತ್ರಿಪಿಂಡೀಕರಣ ಶ್ರಾದ್ಧ
11 ಆವರ್ತಿ
ಕೈಲಾಸ ಯಂತ್ರ ಆರಾಧನೆ ಮೂರು ವರ್ಷಗಳಲ್ಲಿ
10 ಲಕ್ಷ
ಪಂಚಾಕ್ಷರೀ ಮಂತ್ರ ಅನುಷ್ಠಾನ ಒಂದು ವರ್ಷದಲ್ಲಿ
ದೇವೀ
ಉಪಾಸನೆ ಪ್ರಾಯಶ್ಚಿತ್ತ – ಪಂಚದುರ್ಗಾ ಮಂತ್ರದಿಂದ ಹೋಮ
ಸಮಯಗಡುವುಪ್ರಾಯಶ್ಚಿತ್ತಗಳನ್ನು ಮೇಷ ಮಾಸ 2025 ರೊಳಗೆ ಮುಗಿಸಬೇಕು
ಏಕಮನಸ್ಸುಭಿನ್ನಾಭಿಪ್ರಾಯ ಬಿಟ್ಟು ಎಲ್ಲರೂ ಒಗ್ಗೂಡಿ ಕಾರ್ಯ ಮಾಡಬೇಕು
ಶ್ರದ್ಧಾ ಭಕ್ತಿಎಲ್ಲಾ ಕಾರ್ಯಗಳನ್ನು ಸಂಪೂರ್ಣ ಶ್ರದ್ಧಾ ಭಕ್ತಿಯಿಂದ ಮಾಡಬೇಕು
ಗುರು ನಿರ್ದೇಶನಗೊಂದಲ ಬಂದರೆ ಪ್ರಶ್ನೆ ಇರಿಸಿದ ದೈವಜ್ಞರನ್ನು ಸಂಪರ್ಕಿಸಬೇಕು
ಪರಿವಾರ ಮತ್ತು ಉತ್ಸವ

ಪರಿವಾರ ದೇವತೆಗಳು

The divine family around Sri Ramalingeshwara
ಸರ್ಪ
ಕಿರಾತ
ಮೂರ್ತಿ
ಬ್ರಹ್ಮ
ಚಾಮುಂಡಿ
ಚೌಡಿ
ಗಣಪತಿ
ಅಂಬಿಕೆ
ವೀರಭದ್ರ
ಶ್ರೀ ರಾಮ
ಲಿಂಗೇಶ್ವರ

ಮುಖ್ಯ ಮತ್ತು ಬಾಹ್ಯ ಪರಿವಾರ

ಮುಖ್ಯ ಪರಿವಾರ · Inner circle
ಗಣಪತಿಅಂಬಿಕೆವೀರಭದ್ರ
ಬಾಹ್ಯ ಪರಿವಾರ · Outer circle
ಸರ್ಪಕಿರಾತ ಮೂರ್ತಿಬ್ರಹ್ಮಚಾಮುಂಡಿಚೌಡಿ
  • ಮೂಲ ಸ್ಥಾನದಲ್ಲಿ ಗಣಪತಿ ಮತ್ತು ಅಂಬಿಕೆ ಶೋಧನೆ
  • ವೀರಭದ್ರ, ಬ್ರಹ್ಮ, ಕಿರಾತ ಮೂರ್ತಿ ವ್ಯವಸ್ಥೆ
  • ಸರ್ಪ ಸಾನ್ನಿಧ್ಯದ ಯಥಾವಿಧಿ ಪ್ರತಿಷ್ಠಾಪನೆ
ನವರಾತ್ರಿNavaratri
ಗಣೇಶೋತ್ಸವGaneshotsava
ಕಾರ್ತಿಕ ದೀಪೋತ್ಸವKarthika Deepotsava
ಶ್ರಾವಣ ಸೋಮವಾರ ಧಾನ್ಯ ನೈವೇದ್ಯShravana Mondays
ಶಿವರಾತ್ರಿMahashivaratri
ದೈನಂದಿನ ಪೂಜೆ Daily
  • ಪ್ರತಿನಿತ್ಯ ತೆಂಗಿನಕಾಯಿ ನೈವೇದ್ಯ
  • ಪಂಚಾಯತನ ಶಿಲೆಗಳ ಪೂಜೆ
  • ನಿತ್ಯ ಅರ್ಚಕರ ನಿಯುಕ್ತಿ
ವಿಶೇಷ ದಿನಗಳು Special days
  • ಪ್ರತಿ ಸೋಮವಾರ / ಹುಣ್ಣಿಮೆ ರುದ್ರಾಭಿಷೇಕ
  • ರಾಮನವಮಿಯಂದು ಹೆಸರುಕಾಳಿನ ಕೋಸಂಬರಿ ಮತ್ತು ಪಾನಕ
  • ವಾರ್ಷಿಕ ಉತ್ಸವಗಳನ್ನು ದೇವಸ್ಥಾನದಲ್ಲಿಯೇ ಆಚರಣೆ
ನೀಲನಕ್ಷೆ

ನೂತನ ಶಿಲಾಮಯ ದೇವಾಲಯ

Blueprint of the new stone temple — tap to enlarge
ಆಧಾರ ಗ್ರಂಥಗಳು · Texts
ಮಯಮತ · ಮಾನಸಾರ · ವಾತುಲಾಗಮ
ಶಿಲ್ಪ ಶೈಲಿ · Style
ಕೆಳದಿ – ಇಕ್ಕೇರಿ
ನಿರ್ಮಾಣ · Material
ಸಂಪೂರ್ಣ ಶಿಲಾಮಯ
ಮುಂದಿನ ಯೋಜನೆಗಳು

ನಾವು ಒಟ್ಟಾಗಿ ನಿರ್ಮಿಸುವುದು

What we will build together
ದೇವಸ್ಥಾನ ಜೀರ್ಣೋದ್ಧಾರTemple renewal
  • ಪ್ರಸ್ತುತ ಎರಡೂ ಬಿಂಬಗಳನ್ನು ವಿಸರ್ಜಿಸಿ ಹೊಸ ಬಿಂಬ ಪ್ರತಿಷ್ಠಾಪನೆ
  • ಶಾಸ್ತ್ರೋಕ್ತ ಪ್ರಮಾಣದ ನಂದಿ ವಿಗ್ರಹ ಪ್ರತಿಷ್ಠಾಪನೆ
  • ಪ್ರಾಸಾದ, ಮಂಟಪ, ಉಪಾಲಯಗಳ ಸಹಿತ ನವ ನಿರ್ಮಾಣ
ಪರಿವಾರ ದೇವತೆಗಳ ಪ್ರತಿಷ್ಠಾಪನೆParivara deities
  • ಮೂಲ ಸ್ಥಾನದಲ್ಲಿ ಗಣಪತಿ ಮತ್ತು ಅಂಬಿಕೆ ಶೋಧನೆ
  • ವೀರಭದ್ರ, ಬ್ರಹ್ಮ, ಕಿರಾತ ಮೂರ್ತಿ ವ್ಯವಸ್ಥೆ
  • ಸರ್ಪ ಸಾನ್ನಿಧ್ಯದ ಯಥಾವಿಧಿ ಪ್ರತಿಷ್ಠಾಪನೆ
ವ್ಯವಸ್ಥಾಪನಾ ಸುಧಾರಣೆTemple management
  • ನಿತ್ಯ ಅರ್ಚಕರ ನಿಯುಕ್ತಿ
  • ತಂತ್ರಿಗಳ ನಿರ್ಣಯ
  • ವ್ಯವಸ್ಥಾಪನಾ ಸಮಿತಿ ಆರಂಭ
ಅಷ್ಟಮಂಗಲ ಪ್ರಶ್ನೆ✓ 13 ಜುಲೈ 2024
ನೀಲನಕ್ಷೆ ಸಿದ್ಧ✓ ಪೂರ್ಣ
ನಿಧಿ ಸಂಗ್ರಹ ₹2 ಕೋಟಿ● ಈಗ ನಡೆಯುತ್ತಿದೆ
ಶಿಲಾಮಯ ನಿರ್ಮಾಣಮುಂದಿನ ಹಂತ
ಬಿಂಬ ಮತ್ತು ಪರಿವಾರ ಪ್ರತಿಷ್ಠಾಪನೆಮುಂದಿನ ಹಂತ
ನಿತ್ಯ ಪೂಜೆ ಮತ್ತು ಉತ್ಸವಗುರಿ
ದೇವಾಲಯ ನಿರ್ಮಾಣದ ಪುಣ್ಯ
ಮಂದಿರಸ್ಯ ಪ್ರತಿಷ್ಠಾಂ ಚ ಜೀರ್ಣೋದ್ಧಾರಂ ತಥೈವ ಚ ।
ಯಃ ಕರೋತಿ ಮಹಾಭಾಗಃ ಸೋಽಶ್ವಮೇಧಫಲಂ ಲಭೇತ್ ॥
ದೇವಾಲಯ ನಿರ್ಮಾಣ ಮತ್ತು ಜೀರ್ಣೋದ್ಧಾರವನ್ನು ಮಾಡುವವನು ಅಶ್ವಮೇಧ ಯಾಗದ ಫಲವನ್ನು ಪಡೆಯುತ್ತಾನೆ.One who builds or renews a temple gains the merit of the Ashwamedha yajna.
ಅಂದಾಜು ವೆಚ್ಚ

ಪ್ರತಿ ರೂಪಾಯಿಯ ಲೆಕ್ಕ

Budget utilisation — where each rupee of the ₹2 crore goes
₹2 Cr
9 segments · 34 work items
Grand total project cost
₹2,00,00,000
Complete Shilamaya reconstruction
ದೇವಾಲಯಕ್ಕೆ ದಾರಿ

ದರ್ಶನಕ್ಕೆ ಬನ್ನಿ

How to reach Kadegunta
Route map from Kodigar bus stop to the temple via Kadegunta Road
ಶ್ರೀ ರಾಮಲಿಂಗೇಶ್ವರ ದೇವಸ್ಥಾನ
ಕೊಡಿಗಾರ್ ಬಸ್ ನಿಲ್ದಾಣಇಲ್ಲಿಂದ ಕಡೆಗುಂಟ ರಸ್ತೆಯಲ್ಲಿ · Start at Kodigar bus stop
0 ಕಿ.ಮೀಕಡೆಗುಂಟ ರಸ್ತೆ ಮೂಲಕ · ಸುಮಾರು 10 ನಿಮಿಷ
6.3 ಕಿ.ಮೀಪರ್ಯಾಯ: ಸೋಂದಾ ರಸ್ತೆ ಮೂಲಕ · ಸುಮಾರು 12 ನಿಮಿಷ
ಹತ್ತಿರದ ಗುರುತುಗಳು: ಶಾಂತಿವನ ಹೋಂ ಸ್ಟೇ, ಸೋಂದಾ ಭಾವ.
ವಿಳಾಸ: ಕಡೆಗುಂಟ, ಪೋಸ್ಟ್ ಸೋಂದಾ, ಶಿರಸಿ ತಾಲೂಕು, ಉತ್ತರ ಕನ್ನಡ, ಕರ್ನಾಟಕ – 581336
Google Maps ನಲ್ಲಿ ದಾರಿ ತೆರೆಯಿರಿ